ಸಾಂಚಿಯ ಬೌದ್ಧ ಸ್ಮಾರಕಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿವೆ. ಭೋಪಾಲದಿಂದ ೪೬ ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ ಸ್ತೂಪಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ. ಸಾಂಚಿಯ ಮಹಾಸ್ತೂಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು. 'ಗ್ರೇಟ್ ಸ್ತೂಪ' ಸಾಂಚಿಯಲ್ಲಿ ಪಾಚೀನಕಾಲದಲ್ಲಿ ಕಟ್ಟಲಾಗಿದೆ.ಚಕ್ರವರ್ತಿ ಅಶೋಕ ಅವರು ೩ ನೇ ಶತಮಾನದಲ್ಲಿ ಇದನ್ನು ಕಟ್ಟಿಸಿದರು. == ಇವನ್ನೂ ನೋಡಿ == ಬೌದ್ಧ ಧರ್ಮ